-
Notifications
You must be signed in to change notification settings - Fork 51
Sources Kannada
ಭೂಮಿಯನ್ನು ಅವಲೋಕಿಸಿದಾಗ ನಮಗೆ ಕಾಣುವ ಸಾಮಾನ್ಯ ಅಂಶಗಳನ್ನು ಅಂದರೆ ಮನೆಗಳು, ಮರಗಳು, ರಸ್ತೆಗಳು, ನದಿ ಮತ್ತು ದೊಡ್ಡ ನಗರಗಳನ್ನು ನಾವು ಕಾಣಬಹುದು ಹಾಗೆ ಓಪನ್ ಸ್ಟ್ರೀಟ್ ಮ್ಯಾಪ್ ಸಹಾಯದಿಂದ ಮ್ಯಾಪ್ ಮಾಡಬಹುದು.ಈ ಎಲ್ಲ ಅವಲೋಕಗಳನ್ನು ನಾವು ಸಮೀಕ್ಷೆಗಳಿಂದ, ಜಿಪಿಎಸ್ ,ಉಪಗ್ರಹ ಚಿತ್ರಣದಿಂದಅಥವ ಚಿತ್ರಗಳಿಂದ ಅನುಕರಿಸಿ ಮ್ಯಾಪ್ ಮಾಡುವುದು ಅತ್ಯವಶಕ. ಸೂಕ್ತವಾದ ಆದಾರ ಇಟ್ಟುಕೊಂಡು ಮ್ಯಾಪಿಂಗ್ ಮಾಡುವುದು ಮ್ಯಾಪಿಂಗ್ ಲಕ್ಷಣವಾಗಿದೆ.
ಸೂಕ್ತವಾದ ಆದಾರಗಳು
- ಮೊದಲನೇ ಆದಾರವಾಗಿ ಸ್ಥಳೀಯ ಜ್ಞಾನ ಬಹಳ ಅವ್ಯಶ್ಯಕ.
- ಉಚಿತವಾಗಿ ಲಬ್ಯವಿರುವ ಉಪಗ್ರಹ ಚಿತ್ರಣಗಳು ಉದಾಹರಣೆ: ಬಿಂಗ್ ಮತ್ತು ಮ್ಯಾಪ್ ಬಾಕ್ಸ್
- ಜಿಪಿಎಸ್ ಗೆರೆಗಳು - ನೀವೆ ಸಂಗ್ರಹಿಸಿರುವುದು ಅಥವ ಓಪನ್ ಸ್ಟ್ರೀಟ್ ಮ್ಯಾಪ್ ತಾಣದಿಂದ ಪಡೆಯಬಹುದು.
- ಮ್ಯಾಪಿಲರಿ ಚಿತ್ರಗಳು.
- ನಕಲು ಅಲ್ಲದೆ ಇರುವ ಮಾಹಿತಿಗಳು - ಉದಾಹರಣೆ : ಅಂಗಡಿಗಳ ತಾಣಗಳು.
- ಅನುಮತಿ ಇರುವ ದತ್ತಾಂಶಗಳು. ಉದಾಹರಣೆ: ವಿಕಿಡಾಟ ಅಥವ ಅನುಮತಿ ಇರುವ ಪರವಾನಗಿಗಳು ಸಿಸಿ0.
ಸೂಕ್ತವಲ್ಲದ ಆದಾರಗಳು
- ಮಾಲೀಕತ್ವವಿರುವ ಮ್ಯಾಪ್ ಗಳು - ಗೂಗಲ್ ಮ್ಯಾಪ್, ಗೂಗಲ್ ಸ್ತ್ರೀಟ್ ವ್ಯು ,ಬಿಂಗ್ ಮ್ಯಾಪ್
- ನಿಮಗೆ ಅನುಮತಿಯ ಬಗ್ಗೆ ತಿಳಿದಿಲ್ಲದ ಪಕ್ಷ್ಯದಲ್ಲಿ.
ಓಪನ್ ಸ್ಟ್ರೀಟ್ ಮ್ಯಾಪ್ ನಲ್ಲಿ ಸಾದ್ಯವಾದ ಡಾಟವು ಮೂಲಮಾತೃಕೆಯಾಗಿದೆ. ಮೂಲವಾಗಿ ಸಮುದಾಯವು ಸಂಗ್ರಹಿಸಿರುವಂತಹದು. ಇಲ್ಲಿ ಸಮೀಕ್ಷಯ ಬಗೆಗಳನ್ನು ಕಾಣಬಹುದು. * ಜಿಪಿಎಸ್ ಸಂಗ್ರಹಿಸುವುದು
- ಮುದ್ರಿತ ನಕ್ಷೆಗಳಿಂದ ಸಂಗ್ರಹಿಸುವುದು
- ಅನುಮತಿ ಪಡೆದಿರುವ ಚಿತ್ರಗಳಿಂದ. ಉದಾಹರಣೆ:ಮ್ಯಾಪಿಲರಿ
ಸುಲಭವಾಗಿ ನಾವು ಉಪಗ್ರಹ ಚಿತ್ರಗಳಿಂದ ಹಾಗು ಸಮೀಕ್ಷೆಗಳಿಂದ ಮ್ಯಾಪಿಂಗ್ ಮಾಡಬಹುದು.
ಸಮೀಕ್ಷೆ, ರಿಯೊ ಡಿ ಜನೆರೋ, ೨೦೧೨
ಸಮೀಕ್ಷೆ, ಬೆಂಗಳೂರು, ೨೦೧೫
ಉಪಗ್ರಹ ಚಿತ್ರಗಳು ತುಂಬಾ ದೊಡ್ಡಮಟ್ಟದ ರೆಸಲ್ಯೂಶನ್ ಇರುವುದರಿಂದ ಬಹಳ ಸರಳವಾಗಿ ಮ್ಯಾಪಿಂಗ್ ಮಾಡಬಹುದು. ಸಮೀಕ್ಷೆಗಿಂತ ಉಪಗ್ರಹ ಚಿತ್ರಗಳಿಂದ ಮ್ಯಾಪ್ ಮಾಡುವುದು ಅತಿ ಸುಲಭ.ಆದರೆ ಎಲ್ಲ ತರಹದ ಡಾಟವನ್ನು ಸಂಗ್ರಹಿಸಲು ಸಾದ್ಯವಿಲ್ಲ. ಉದಾಹರಣೆ: ರಸ್ತೆಗಳ ಹೆಸರು, ಅಂಗಡಿಗಳ ಹೆಸರು, ಊರುಗಳ ಹೆಸರು ಕಂಡು ಹಿಡಿಯಲು ಸಾದ್ಯವಿಲ್ಲ.
#### ಮೂರನೆ ಮೂಲದಿಂದ ಡಾಟ ಆಮದು ತುಂಬಾ ದೊಡ್ಡ ಪ್ರಮಾಣದ ಡಾಟ ಆಮದು ಮಾಡಬಹುದು. ಮೂಲವಾಗಿ ಸರ್ಕಾರದ ವತಿಯಿಂದ ಆಮದು ಮಾಡಬಹುದು.