layout | title | permalink |
---|---|---|
page |
ಬರೆದವರು |
/article-authors/ |
ಹುಟ್ಟಿದ್ದು ಅಂದಿನ ಶಿವಮೊಗ್ಗದಲ್ಲಿ. ಓದಿದ್ದು ಬೆಳೆದಿದ್ದು ಈಗಿನ ಬೆಂಗಳೂರಿನಲ್ಲಿ. ಓದಿದ್ದು ಎಂಜಿನೀರಿಂಗ್. ತಂತ್ರಾಂಶದ ಜೊತೆ ಸಾಹಿತ್ಯ, ಛಾಯಾಚಿತ್ರ ಕಲೆ ಹಾಗೂ ಜಗತ್ತನ್ನು ತಿರುಗಿ ನೋಡುವುದರಲ್ಲಿ ಸದ್ಯದ ಆಸಕ್ತಿ. ಅದೆಲ್ಲೋ ದೂರದಿಂದ ಬರುವ ಯಾವುದೋ ದನಿ ಸದಾ ಕೇಳಿಸುತ್ತಾ ಇರುತ್ತದೆ. ಅದರ ಮಾತು ಕೇಳಿಕೊಂಡು ಜೀವನ ಮಾಡುವ ಯೋಚನೆ.
ಹೆಸರು ಅರ್ಚನ ಬಾವಿಮನೆ. ನಮ್ಮ ಮನೆಯೊಳಗೆ ಬಾವಿ ಆಗಲಿ, ಬಾವಿಯೊಳಗೆ ಮನೆ ಆಗಲಿ ಇಲ್ಲ, ಅದು ನಮ್ಮ ಮನೆತನದ ಹೆಸರು. ಹುಟ್ಟಿದ್ದು ಬೆಳೆದಿದ್ದು ಮಲೆನಾಡ ಹಸಿರ ಸಿರಿಯಲ್ಲಿ ಇರುವ ಕೋಣಂದೂರು ಎಂಬ ಊರಿನಲ್ಲಿ. ಪ್ರಕೃತಿ, ಸಂಗೀತ ಮತ್ತು ಸಾಹಿತ್ಯ ಇವು ನನ್ನ ಮೂರು ಮುತ್ತುಗಳು. ಅಪರಿಚಿತರನ್ನು ಪರಿಚಿತರನ್ನಾಗಿ ಮಾಡಿಕೊಳ್ಳುವ ಹುಚ್ಚು ಹವ್ಯಾಸ ನನ್ನದು. ಎಲ್ಲರ ಜೊತೆಯಲ್ಲೂ ಎಲ್ಲರೊಳಗೊಂದಾಗಿ ಇರಬೇಕೆನ್ನುವ ಮನಸ್ಥಿತಿ ನನ್ನದು.